ಬಾಕ್ರ್ಲ್, ಚಾಲ್ರ್ಸ್ ಗ್ಲೋವರ್
1877-1944. ಇಂಗ್ಲಿಷ್ ಭೌತ ವಿಜ್ಞಾನಿ. 1917ರ ಭೌತವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕ ವಿಜೇತ. ಜನನ 7 ಜೂನ್ 1877, ಲ್ಯಾಂಕಷೈರ್, ಮರಣ ಅಕ್ಟೋಬರ್ 1944. ಸ್ಕಾಟ್ಲೆಂಡ್, ಇವನ ಮೊದಲ ಅಧ್ಯಯನಗಳು ಲಿವರ್ ಪೂಲ್ ಇನ್‍ಸ್ಟಿಟ್ಯೂಟಿನಲ್ಲಿ ನಡೆದುವು. ಅನಂತರ ಅಲ್ಲಿಯ ಯೂನಿವರ್ಸಿಟಿ ಕಾಲೇಜ್ ಸೇರಿ ಪದವೀಧರನಾದ (1898).
ಲಿವರ್‍ಪೂಲ್ ಕಾಲೇಜಿನಲ್ಲಿ ಆಲಿವರ್‍ಲಾಡ್ಜ್ (1851-1940) ಎಂಬ ಪ್ರಸಿದ್ಧ ವಿಜ್ಞಾನಿಯ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದು (1904) ಲಂಡನ್ ವಿಶ್ವವಿದ್ಯಾಲಯ ಸೇರಿದ (1907). ತರುವಾಯ ಕೇಂಬ್ರಿಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಭೌತ ವಿಜ್ಞಾನದ ಪ್ರಾಧ್ಯಾಪಕನಾದ (1909). ಮುಂದೆ ಎಡಿನ್‍ಬರೋ ವಿಶ್ವವಿದ್ಯಾಲಯವನ್ನು ಪ್ರಾಕೃತಿಕ ವಿಜ್ಞಾನದ ಪ್ರಾಧ್ಯಾಪಕನಾಗಿ ಸೇರಿ ಅಂತ್ಯಕಾಲದ ತನಕವೂ ಈ ಹುದ್ದೆಯಲ್ಲೇ ಮುಂದುವರಿದ.

ಜಿ.ಜಿ.ತಾಮ್ಸನ್ (1856-1940) ದೈತ್ಯ ದಾಪು ಇಟ್ಟು ನಡೆಯುತ್ತಿದ್ದ ಆ ದಿನಗಳಂದು ಬಾಕ್ರ್ಲಾ ಆತನ ಜೊತೆ ಕೇಂಬ್ರಿಜಿನಲ್ಲಿ ಎಕ್ಸ್‍ಕಿರಣಗಳ ಗುಣಲಕ್ಷಣ ಅಭ್ಯಸಿಸಿದ. (ಈ ವಿಕಿರಣ ಪ್ರಕಾರ ಬೆಳಕಿಗೆ ಬಂದದ್ದು ತತ್ಪೂರ್ವ 1895ರಲ್ಲಿ) ಪ್ರಾಥಮಿಕ ಎಕ್ಸ್‍ಕಿರಣ ಒಂದು ಪದಾರ್ಥದ ಮೂಲಕ ಹಾದುಹೋಗುವಾಗ ಚದರಿಕೆಗೆ ಒಳಗಾಗುವುದು. ಆಗ ಸಂಭವಿಸುವ ಶಕ್ತಿಹ್ರಾಸದ ಗಣನೆಗೆ ತಾಮ್ಸನ್ ಸೂತ್ರ ಅನ್ವಯಿಸಿ ಪ್ರತಿ ಘನ ಸೆಂಟಿಮೀಟರಿನಲ್ಲಿರುವ ಎಲೆಕ್ಟ್ರಾನುಗಳ ಸಂಖ್ಯೆ ನಿರ್ಧರಿಸಬಹುದೆಂದು ಬಾಕ್ರ್ಲಾ ತೋರಿಸಿಕೊಟ್ಟ. ಎಕ್ಸ್‍ಕಿರಣಗಳು ಆಂಶಿಕವಾಗಿ 

ಧ್ರುವೀಕೃತವಾಗಿರುವುವೆಂದೂ ಸ್ಥಾಪಿಸಿದ. ಪ್ರಾಥಮಿಕ ಎಕ್ಸ್‍ಕಿರಣವೊಂದರ ಸುತ್ತ ಚದರಿದ ವಿಕಿರಣದ ತೀವ್ರತೆ ಅಳೆದು ಅದಕ್ಕೊಂದು ಸೂತ್ರವಿತ್ತ. ಎಕ್ಸ್ ಕಿರಣಗಳಿಗೂ ಅನ್ವಯವಾಗುವ ಸ್ಫುರದೀಪಿ (ಫ್ಲೂರೆಸೆನ್ಸ್) ನಿಯಮವೊಂದಿದೆ ಎಂದು ಪ್ರತಿಪಾದಿಸಿದ.

ಎಕ್ಸ್‍ಕಿರಣಗಳನ್ನು ಕುರಿತಂತೆ ಬಾಕ್ರ್ಲಾ ಎಪ್ಪತ್ತಕ್ಕೂ ಹೆಚ್ಚಿನ ಪ್ರೌಢ ಪ್ರಬಂಧ ಬರೆದಿದ್ದಾನೆ.
(ವಿ.ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ